ವೇದ ವಿಜ್ಞಾನ ಮಂದಿರದ ಸಂಸ್ಥಾಪಕರು ಮತ್ತು
ವ್ಯಾಖ್ಯಾನಕಾರರಾದ
ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರ
ಒಂದು ಕಿರು ಪರಿಚಯ
ಜೀವಿಗಳೆಲ್ಲಾ ಕರ್ಮಸ್ವಾತಂತ್ರ್ಯ ರಹಿತವಾಗಿದ್ದು, ಅವುಗಳು ಒಂದು ನಿಯಮದಂತೆಯೇ ಬದುಕ್ತವೆ. ಆದರೆ ಮಾನವ ತನ್ನ ಋಣ ಕರ್ಮಕ್ಕಾಧರಿಸಿ ಬದುಕಿ ಆತ್ಮೋನ್ನತಿಯತ್ತ ಸಾಗುವ ಚೈತನ್ಯ.
“ತಿರುಕ ಸಂಹಿತ”
- ಅಗ್ನ್ಯಾವೈಷ್ಣವೀ ಯಾಗ – 5 ವರ್ಷಗಳು
- ಪುಂಡರೀಕ ಯಾಗ – 22 ದಿನಗಳು
- ಗಾಯತ್ರಿ ಯಾಗ – 30 ದಿನಗಳು
- ವಾಜಪೇಯಸೋಮ ಯಾಗ – 30 ದಿನಗಳು
- ವಿಶ್ವಜಿಗಿಷದ್ ಯಾಗ – 1 ವರ್ಷ
- ಮಹಾವ್ರತ ದೀರ್ಘಸತ್ರ ಯಾಗ-206 ದಿನಗಳು
- ರಾಜಸೂಯ ಯಾಗ – 30 ದಿನಗಳು
- ಧನ್ವಂತರಿ ಮಹಾ ಯಾಗ – 1 ವರ್ಷ
- ಇನ್ನೂ ಅನೇಕ ಯಾಗಗಳನ್ನು ಮಾಡಿದ್ದಾರೆ
ನಿಲ್ಲದ ಜ್ಞಾನಾರ್ಜನೆ…
ಪರಮಾತ್ಮನು ಜಗತ್ತನ್ನು ಸೃಷ್ಟಿಸಿ, ಪರಿಪಾಲಿಸುವಂತೆ, ತಾಯಿಯು ಮಕ್ಕಳನ್ನು ಸಾಕಿ ಸಲಹಿ ರಕ್ಷಣೆಯ ಭಾರ ಹೊರುತ್ತಾಳೆ. ಅದರಂತೆ ವಿಶ್ವದ ರಕ್ಷಣೆಗೆ ಮಾನವ ರೂಪದಲ್ಲಿ ಪ್ರತ್ಯಕ್ಷವಾಗಿ ಕೆಲವರು, ಪರೋಕ್ಷವಾಗಿ ಕೆಲವರು ಹಗಲಿರುಳೂ ಶ್ರಮಿಸುವುದನ್ನು ನೋಡುತ್ತೇವೆ. ಲೋಕ ಕಲ್ಯಾಣವೇ ಪರಮ ಗುರಿಯಾಗಿಸಿ ಕೊಂಡಿರುವ ಸತ್ಪುರುಷರೆಲ್ಲರು ಭಗವಂತನ ಸೇವಕರು. ನಿಸ್ವಾರ್ಥ ಪ್ರಯತ್ನ ಶೀಲರು, ಸಾಮಾನ್ಯರಿಗೆ ಸನ್ಮಾರ್ಗದರ್ಶಕರು ಅಂತಹಾ ಸತ್ಪುರುಷರು, ಮಹಾಪುರುಷರ ಸಾಲಿನಲ್ಲಿ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರನ್ನು ಕಾಣಬಹುದಾಗಿದೆ.
“ಪುರೋಧಸಾಂ ಚ ಮುಖ್ಯಂ ಮಾಂ” ಎಂಬಂತೆ ವೇದ ಪುರುಷನಾಗಿ, ಯಜ್ಞಪುರುಷನಾಗಿ ಯಾಗಗಳನ್ನು ಮಾಡಿದ ತಪಸ್ವಿ ಇವರು. ಪೂರ್ವೋತ್ತರ ಮೀಮಾಂಸಕರಾಗಿ, ವೇದ ಕೃಷಿಕರಾಗಿ, ಕರ್ಮನಿಷ್ಠರಾಗಿ ಸಮಾಜಕ್ಕೆ ಅನೇಕ ಸತ್ಪಲಗಳನ್ನು ನೀಡಿದವರು. ಗೃಹಸ್ಧನಾಗಿಯೂ ನಿಷ್ಕಾಮ ಸಂನ್ಯಾಸಿಯಂತೆ, ಸದೇಹಿಯಾದರೂ ವಿದೇಹಿಯಂತೆ, ಪ್ರತ್ಯಕ್ಷ – ಪರೋಕ್ಷವಾಗಿ ತಾರತಮ್ಯವಿಲ್ಲದೇ, ಮೇಲು ಕೀಳೆನ್ನದೇ ಸರ್ವರಲ್ಲೂ ಸಮಭಾವ, ಪ್ರೀತ್ಯಾದರ, ಆತ್ಮೀಯ ಭಾವವನ್ನು ತಳೆದು ಸರ್ವರ ಉನ್ನತಿಗೆ ಶ್ರಮಿಸುತ್ತಿರುವವರು. ವೇದ ವೇದಾಂಗ ಉಪನಿಷದ್ ಜ್ಞಾನ ಪ್ರಸಾರ, ಲೋಕ ಹಿತ ಕಾರ್ಯಗಳ ಮೂಲಕ ತಮ್ಮ ಜೀವನವನ್ನು ಸಮಾಜದ ಉನ್ನತಿಗೆ ಮುಡಿಪಾಗಿಟ್ಟಿರುವ ನಿಷ್ಕಾಮ ಕರ್ಮಯೋಗಿಯಾಗಿದ್ದಾರೆ.
ಇವರು ಮಾಡಿದ ಅನೇಕ ಯಾಗಗಳಲ್ಲಿ ಒಂದು ಯಾಗದ ಸಂಕ್ಷಿಪ್ತ ವಿವರಣೆ
ಅಗ್ನ್ಯಾವೈಷ್ಣವಿಯಾಗ – ಸಮಗ್ರ ಜ್ಞಾನ ಆವಿರ್ಭಾವ
ಸತತ 5 ವರ್ಷಗಳವರೆಗೆ ಶುಲ್ಬಸೂತ್ರ, ಬೋಧಾಯನ, ಆಶ್ವಲಾಯನ, ಮೈತ್ರಾಯಣೀಯ ಸೂತ್ರೋಕ್ತ, ಋಕ್, ಯಜುಸ್ಸು, ಸಾಮ, ಅರ್ಥವಾದಿ ವೇದೋಕ್ತ ಮತ್ತು ನಾರಾಯಣ, ನಾರಂಗ ತಂತ್ರೋಕ್ತವಾದ ಮಹಾದೀರ್ಘಸತ್ರಯಾಗ ಮಾಡಲು ಅಳವಡಿಸಿಕೊಂಡ ಅಷ್ಟ ವ್ರತಗಳು ಮತ್ತು ಅದರಿಂದ ದೊರೆತಂತಹ ಫಲಗಳು ಈ ರೀತಿ ಇವೆ.
ಯಾರ ತಪ್ಪನ್ನೂ ಹೇಳುವುದಿಲ್ಲ, ಒಂದು ವಿಚಾರ ಒಮ್ಮೆ ಮಾತ್ರ ಹೇಳುವುದು, ಎಲ್ಲವನ್ನೂ ಸಮನಾಗಿ ಸ್ಪೀಕರಿಸುವುದು, ಶುಭಾಶುಭಗಳೆಲ್ಲವನ್ನೂ ಸಮತಾಭಾವದಿಂದ ಗ್ರಹಿಸುವುದು, ನಿಂದೆ – ಹೊಗಳಿಕೆಗೆ ಯಾವುದೇ ಬೆಲೆ ಕೊಡದಿರುವುದು, ಸದಾ ಧೈವಚಿಂತನೆ – ಧೈವ ಸೇವೆಯೇ ಗುರಿಯಾಗಿರುವುದು, ಸ್ವಹಿತಕ್ಕಾಗಿ ಯಾವುದನ್ನೂ ಮಾಡದಿರುವುದು, ಯಾರಿಂದಲೂ ಸ್ವಂತಕ್ಕಾಗಿ ಬೇಡದಿರುವುದು.
ಇದರಿಂದಾಗಿ ಯಾಗಸೂತ್ರಗಳ ಪರಿಷ್ಕರಣೆ, ವೇದಾದಿ ಮಂತ್ರಗಳ ಧಾರಣಾ ಶಕ್ತಿ, ಚಾಲ್ತಿಯಲ್ಲಿರುವ ಸೂತ್ರೋಕ್ತ ವಿಧಿ-ವಿಧಾನಗಳ ಉಪಯುಕ್ತತೆ ಮತ್ತು ಸೂಕ್ತ ಪರಿಷ್ಕರಣೆ, ಪುರಾತನ ಋಷಿಮುನಿಗಳ ಛಾಯಾ ದರ್ಶನ, ಪ್ರಯೋಗ ಸಿದ್ಧಿ, ಅಸ್ತ್ರಾದಿಗಳ ಸಿದ್ಧಿ, ಯಾಗ ದೇವತಾ ಅನುಗ್ರಹಸಿದ್ಧಿ, ಲೋಕಕಲ್ಯಾಣದ ಗುರಿಯೆಲ್ಲವೂ ತುಂಬಾ ಉತ್ತಮವೆಂಬ ರೀತಿಯಲ್ಲಿ ಲಭಿಸಿರುತ್ತದೆ. ಯಾಗದಲ್ಲಿ ಕಂಡುಬಂದ ಸತ್ಯ ವಿಚಾರಗಳನ್ನು ಲೋಕಮುಖಕ್ಕೆ ತಿರುಕ ಸಂಹಿತಾ ಎಂಬ ಹೆಸರಿನಲ್ಲಿ ವಿಷಯಾಧಾರಿತವಾಗಿ 18 ಭಾಗಗಳಲ್ಲಿ ಪ್ರಕಟವಾಗಿದೆ. ಅದನ್ನು ಓದಿ ತಿಳಿಯಬಹುದು.
ಇಂತಹಾ ಯಾಗಗಳನ್ನು ಮಾಡಿದ ಈ ವಿಶೇಷ ಮಹನೀಯರಾದ ಶ್ರೀ ಕೆ.ಎಸ್.ನಿತ್ಯಾನಂದ ಸ್ವಾಮೀಜಿಯವರು ಪ್ರಸಕ್ತ ಭಗವದ್ಗೀತೆಯಲ್ಲಿರುವ ಯೋಗಶಾಸ್ತ್ರವನ್ನು ಮಾತ್ರ ಪರಿಚಯ ಮಾಡಿಕೊಟ್ಟಿರುತ್ತಾರೆ. ಅದರ ಯಥಾವತ್ ರೂಪವನ್ನು ನಮ್ಮಿಂದ ಪ್ರಕಟವಾದ ಭಗವದ್ಗೀತೆ ಎಲ್ಲಾ ಅಧ್ಯಾಯಗಳನ್ನು ಓದಿ ಅರ್ಥಮಾಡಿಕೊಂಡು ಸಾಧಿಸಿಕೊಂಡರೆ ಸ್ವಾಮೀಜಿಯವರ ಶ್ರಮ ಸಾರ್ಥಕವಾಗುತ್ತದೆ.
Best Author Awards 2012
Arcu pellentesque nisi consectetur netus aenean metus sit mattis sit sed.
World’s #1 Best-selling Book
Diam nibh non in enim nunc suscipit risus, adipiscing aenean quisque.
NYT Best-selling Author 2014
Urna donec dolor bibendum lectus arcu purus eget nisl, ut nisl vitae.
Best Author Awards 2012
Morbi odio sodales et facilisis mi nibh fringilla quis risus ultricies facilisis.
My First Book
Quisque suspendisse fames eget risus quam posuere eu massa, consequat nec vestibulum fermentum velit nunc, dictum dui orci urna vitae
Released on Store
Aliquam mattis lorem fermentum neque, quam arcu malesuada id quis est adipiscing in fringilla nulla ultricies.
US Bestselling Book
Ultrices ultrices sed ultrices suspendisse quisque in etiam adipiscing ligula rhoncus vivamus tincidunt amet sem cursus hendrerit nulla.
My First Award
Cras amet amet in egestas nibh vestibulum feugiat bibendum tempus ut ultricies risus aliquam vestibulum malesuada vitae sit.
World’s #1 Bestselling Author
Curabitur malesuada turpis mauris mollis eget tincidunt lacus fusce purus dolor hac viverra viverra sagittis augue purus venenatis.