ūrdhva-mūlam adhaḥ-śhākham aśhvatthaṁ prāhur avyayam
chhandānsi yasya parṇāni yas taṁ veda sa veda-vit
ಅಶ್ವತ್ಥ ಮರದ ಬೇರು ಮೇಲ್ಮುಖವಾಗಿ ಮತ್ತು ರಂಬೆ ಕೊಂಬೆಗಳು ಕೆಳಮುಖವಾಗಿದೆ ಎಂದು ವ್ಯಾಖ್ಯಾನಿಸಲ್ಪಡುತ್ತಿದೆ. ಒಂದು ಮರನ್ನು ತಲೆಕೆಳಗಾಗಿ ಅಧ್ಯಯಮಾಡಿ ಸಾಧಿಸುವುದಾದರು ಏನು?
ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ – ಎಂದು ಪ್ರತೀ ಅಧ್ಯಯದ ಕೊನೆಯಲ್ಲಿ ಪಠಿಸಲಾಗುತ್ತಿದೆ. ಆದರೆ ಈ ಶ್ಲೋಕದಲ್ಲಿ ಹೇಳಿರುವ ಹಾಗೆ ಯೋಗಶಾಸ್ತ್ರವನ್ನು ಮಾತ್ರ ಯಾರು ವ್ಯಾಖ್ಯಾನಿಸಿಲ್ಲ, ಹೇಳಿಕೊಡುತ್ತಿಲ್ಲ.
ಇಲ್ಲೇ ಇರುವುದು ರಹಸ್ಯವಾದ ವಿಚಾರ. ಬಹುಶಃ ಭಗವದ್ಗೀತೆಯ ಕುರಿತು ವ್ಯಾಖ್ಯಾನಿಸಿರುವ ವ್ಯಾಖ್ಯಾನಕಾರರಿಗೆ ಅದರಲ್ಲಿರುವ ಯೋಗಶಾಸ್ತ್ರದ ಅರಿವಿಲ್ಲದಿರಬಹುದು. ಈ ಯೋಗಶಾಸ್ತ್ರದ ರಹಸ್ಯವನ್ನು ತಿಳಿದು ಸಾಧಿಸಿದರೆ, ಯಾರು ಕೂಡ ಯೋಗೇಶ್ವರ ಅಥವಾ ಕೃಷ್ಣನಾಗಬಹುದು.
ಶಿವನು ಮತ್ತು ಕೃಷ್ಣನು ಸಂಸಾರಿಯಾಗಿ ಯೋಗೇಶ್ವರರಾಗಿದ್ದಾರೆ. ಸಾಮಾನ್ಯ ಗೃಹಸ್ಥನು ಕೂಡ ಯೋಗೇಶ್ವರನಾಗುವ ಅವಕಾಶವಿದೆ.
ಬ್ರಹ್ಮ ಋುಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಶ್ರೀನಿವಾಸ ನಗರ, ರಾಂಪುರ, ಚಿಕ್ಕಮಗಳೂರು ಇವರೊಂದಿಗೆ ಮಥನವನ್ನು ಮಾಡಿ, ಭಗವದ್ಗೀತೆಯಲ್ಲಿರುವ ಮೂಲ ಯೋಗಶಾಸ್ತ್ರದ ರಹಸ್ಯವನ್ನು ಈ ಪುಸ್ತಕದ ಮೂಲಕ ಅನಾವರಣಗೊಳಿಸಲಾಗಿದೆ.
ಭಾರತವು ವಿಶ್ವ ಗುರುವಾಗಬೇಕೆಂಬ ಅಪೇಕ್ಷೆ ಸನಾತನಿಗಳಾದ ನಮ್ಮಲ್ಲರಲ್ಲೂ ಇದೆ. ಅದು ನಮ್ಮಿಂದಲೇ ಆರಂಭವಾಗಲಿ…
ಈ ಪುಸ್ತವನ್ನು ಓದಿ ಸಾಧಿಸಿಕೊಳ್ಳೊಣ…
Reviews
There are no reviews yet.