ಇತಿಹಾಸದ ಪುಟಗಳನ್ನು ತೆರೆದಾಗ ಅನೇಕ ಸಂಸ್ಕೃತಿಗಳು ಹುಟ್ಟಿ ಬೆಳೆದು ವಿಜೃಂಭಿಸಿ ಕಾಲದ ಹೊಡೆತಕ್ಕೆ ಸಿಲುಕಿ ನಾಶ ಹೊಂದಿರುವ ಅಥವಾ ಪರಿವರ್ತನೆಗೊಂಡಿರುವುದನ್ನು ಕಾಣುತ್ತೇವೆ. ಹರಪ್ಪ ಮಹೆಂಜೋದಾರೋ, ಗ್ರೀಕ್, ರೋಮನ್, ಈಜಿಪ್ಟ್, ಮೆಸಪೋಟಾಮಿಯಾ, ಆರ್ಯ, ದ್ರಾವಿಡ ಮೊದಲಾದ ಸಂಸ್ಕೃತಿಗಳು ಒಂದು ಕಾಲದಲ್ಲಿ ಭವ್ಯತೆಯನ್ನು ಮೆರೆದು ಇಂದು ಕಾಲ ಗರ್ಭದಲ್ಲಿ ಹುದುಗಿಹೋಗಿವೆ. ಅಂತಹ ಅನೇಕ ಸಂಸ್ಕೃತಿಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ತನೂಡಿ ಮನೆತನವು ಒಂದು. ಸುತ್ತಲಿನ ಸಮಾಜದ ಬದುಕಿಗೆ ಭದ್ರ ಬುನಾದಿಯನ್ನು ಕೊಟ್ಟು, ನ್ಯಾಯ ನಿಷ್ಠುರತೆ ಧರ್ಮ ಬದ್ಧತೆಯೊಂದಿಗೆ ಸೂಕ್ತ ನ್ಯಾಯ ವ್ಯವಸ್ಥೆಯನ್ನು ನೀಡಿ ಎಲ್ಲಾ ವರ್ಗದ ಜನರು ನೆಮ್ಮದಿಯಿಂದ ಬದುಕುವಂತಹ ಅತ್ಯುತ್ತಮ ವಾತವರಣವನ್ನು ಸೃಷ್ಟಿಸಿದ ಮನೆತನ ತನೂಡಿ ಮನೆ.
ಈ ಮನೆತನದ ಈ ತಲೆಮಾರಿನ ರವಿ ಹೆಗ್ಗಡೆಯವರಿಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಎಲ್ಲಿಯೂ ಬಗೆಹರಿಯದ ಕಾರಣ ಚಿಕ್ಕಮಗಳೂರಿನ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಿದರು. ಸಮಸ್ಯೆಯ ಮೂಲವನ್ನು ಹುಡುಕಿಕೊಂಡು ಹೋದ ಸ್ವಾಮೀಜಿಯವರಿಗೆ ಅತ್ಯುತ್ತಮವಾದ ಸಂಸ್ಕೃತಿಯೊಂದು ಸುಮಾರು 700 ವರ್ಷಗಳ ಕಾಲ ಸಮಾಜವನ್ನು ಬೆಳಗಿ ಬೆಳೆದು ಬಂದಿರುವ ಇತಿಹಾಸ ತಿಳಿದು ಬಂತು. ಅಲ್ಲಿನ ವಾಸ್ತು ಶಿಲ್ಪ, ಸಹಜ ಪ್ರಾಕೃತಿಕ ಲಕ್ಷಣ ಅತ್ಯದ್ಭುತ. ಜೀವನ ಆದರ್ಶದಿಂದ ಬಾಳಿ ಬದುಕಿದ ಮಾನವ ಶ್ರೇಷ್ಠರು ನೆಲೆಸಿದ್ದ ಪುಣ್ಯ ಭೂಮಿಯ ಇತಿಹಾಸ ತನೂಡಿ ಮನೆತನದೊಂದಿಗೆ ಬೆಸೆದು ಕೊಂಡಿದೆ. ಇದೊಂದು ಸಂಶೋಧನಾ ಯೋಗ್ಯ ಸಂಸ್ಕೃತಿಯಾಗಿರುವುದರಿಂದ ಹೆಚ್ಚಿನ ಹೆಚ್ಚಿನ ಅಥ್ಯಯನ ಮಾಡಿದರೆ ಇನ್ನಷ್ಟು ವಿಚಾರಗಳು ಬೆಳಕಿಗೆ ಬಂದು ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಬಹುದು.
ಬಹು ಮುಖ್ಯವಾಗಿ ಈ ಪುಸ್ತಕದಲ್ಲಿ ಗಮನಿಸಬೇಕಾದದ್ದು 700 ವರ್ಷಗಳ ಹಿಂದಿನ ಇತಿಹಾಸವನ್ನು ಭೂಮಿ ಅಗೆದು, ಅಲ್ಲಿರುವಂತಹ ವಸ್ತುಗಳು ಎಷ್ಟು ಪುರಾತನದ್ದು, ಬರೆದಿಟ್ಟ ವಂಶ ವೃಕ್ಷ, ಜಾನಪದ ಕಥೆಗಳು ಮುಂತಾದ ಯಾವುದೂ ಇಲ್ಲದಿರುವಾಗ ಹೇಗೆ ಅದನ್ನು ಕಂಡು ಹಿಡಿಯಲು ಸಾಧ್ಯ? ಆದುನಿಕ ವಿಜ್ಞಾನದಿಂದ 700 ವರ್ಷಗಳ ಹಿಂದಿನ ಇತಿಹಾಸವನ್ನು ಇವು ಯಾವುದೂ ಇಲ್ಲದಿದ್ದಾಗ ತಿಳಿಯಲು ಸಾಧ್ಯವೆ? ಭಾರತ ಪ್ರಾಚೀನ ವಿಧ್ಯೆಗಳಿಂದ ಇದು ಸಾಧ್ಯ ಎನ್ನುವುದನ್ನು ತಿಳಿಸುತ್ತಿದೆ ಈ ಪುಸ್ತಕ. ಓದುಗರು ಬೆರಗಾಗುವಂತಹ ವಿಚಾರಗಳು ಈ ಪುಸ್ತಕದಲ್ಲಿ ಅನಾವರಣಗೊಂಡಿದೆ!
Reviews
There are no reviews yet.