ಪುಸ್ತಕ ವಿವರಣೆ
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್ ।
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ॥ 1 ॥
ಪುಸ್ತಕವು ಪುರುಷೋತ್ತಮ ಯೋಗ ಅಧ್ಯಾಯದ ಮೊದಲ ಶ್ಲೋಕದಿಂದ ಪ್ರಾರಂಭಗೊಳ್ಳುತ್ತದೆ. ಈ ಶ್ಲೋಕದಲ್ಲಿ ಶ್ರೀಕೃಷ್ಣರು ಅಶ್ವತ್ತ ವೃಕ್ಷವನ್ನು (ಆಲದ ಮರ) ಉಲ್ಲೇಖಿಸುತ್ತಾನೆ—ಆದರೆ ಅವನು ಈ ಉಪಮೆಯನ್ನು ಬಳಸಿಕೊಂಡು ಇನ್ನೊಂದು ಆಳವಾದ ಸಂದೇಶವನ್ನು ನೀಡುತ್ತಿದ್ದಾನೆಯೇ? ಭಗವದ್ಗೀತೆ ಸಂಪೂರ್ಣವಾಗಿ ವೈಜ್ಞಾನಿಕ ಸ್ವರೂಪ ಹೊಂದಿದ್ದು, ಬೇರುಗಳು ಮೇಲ್ಭಾಗದಲ್ಲಿರುತ್ತವೆ ಮತ್ತು ಕೊಂಬೆಗಳು ಕೆಳಭಾಗದಲ್ಲಿರುತ್ತವೆ ಎಂಬ ಆಲದ ಮರದ ಸ್ವರೂಪವು ಭೌತಿಕವಾಗಿ ಸಾಧ್ಯವಿಲ್ಲ. ಹೀಗಾಗಿ, ಗೀತೆಯನ್ನು ಕೇವಲ ಸಂಸ್ಕೃತ ಪದಗಳ ನೇರ ಅನುವಾದದ ಮೂಲಕ ಅರ್ಥೈಸಲು ಸಾಧ್ಯವಿಲ್ಲ.
ಗೀತೆ ಅನುಷ್ಟುಪ್ ಛಂದಸ್ಸಿನಲ್ಲಿ ರಚನೆಯಾಗಿದ್ದು ಮತ್ತು ಸಂಹಿತಾ ಮಂತ್ರಗಳ ರೂಪದಲ್ಲಿದೆ. ಪ್ರತಿ ಪಾದಗಳಲ್ಲಿ (8 ಅಕ್ಷರಗಳ ವಿಭಾಗ) ಅದರದ್ದೇ ಆದ ವಿಶೇಷ ಅರ್ಥವಿದೆ. ಆದ್ದರಿಂದ, ಗೀತೆಯ ವಾಸ್ತವಿಕ ಅರ್ಥವನ್ನು ಗ್ರಹಿಸುವುದಾದರೆ, ಅದನ್ನು ಈ ದೃಷ್ಟಿಕೋಣದಿಂದಲೇ ನೋಡಬೇಕು.
ವೇದ ಗ್ರಂಥಗಳ ಚರ್ಚೆಯಲ್ಲಿ ವಿಷಯವನ್ನು ಪರಿಚಯಿಸುವಾಗ ಶ್ಲೋಕವನ್ನು ಉಲ್ಲೇಖಿಸುವುದು ಸಂಪ್ರದಾಯ. ಗೀತೆಯಲ್ಲಿ, ಅಧ್ಯಾಯದ ಆರಂಭ ಮತ್ತು ಅಂತ್ಯದಲ್ಲಿ ಕೆಳಗಿನ ಶ್ಲೋಕವನ್ನು ಉಚ್ಚರಿಸಲಾಗುತ್ತದೆ:
“ಇತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ…”
ಈ ಶ್ಲೋಕದಲ್ಲಿ “ಯೋಗಶಾಸ್ತ್ರ” ಎಂಬ ಪದ ಪ್ರಸ್ತಾಪವಾಗಿದ್ದು, ಗೀತೆಯ ಪ್ರತಿಯೊಂದು ಅಧ್ಯಾಯದ ಶೀರ್ಷಿಕೆಯಲ್ಲಿ “ಯೋಗ” ಪದವು ಅಂತರಭುಕ್ತವಾಗಿದೆ. ಗೀತೆ ಯೋಗಶಾಸ್ತ್ರವೇ ಆಗಿದ್ದರೆ, ಮತ್ತು ಶ್ರೀಕೃಷ್ಣನು ಯೋಗೀಶ್ವರನೇ ಆಗಿದ್ದರೆ, ಹಿಂದಿನ ಭಾಷ್ಯಗಳು ಯೋಗದ ದೃಷ್ಟಿಕೋಣದಿಂದ ಗೀತೆಯ ವ್ಯಾಖ್ಯಾನವನ್ನು ಮಾಡಿಲ್ಲವೇಕೆ?
ಈ ಪುಸ್ತಕವು ಮೊದಲ ಬಾರಿಗೆ ಭಗವದ್ಗೀತೆಯನ್ನು ಯೋಗಶಾಸ್ತ್ರವಾಗಿ ಪ್ರಸ್ತುತಪಡಿಸುತ್ತಿದೆ, ಮತ್ತು ಆಳವಾದ ಯೋಗಜ್ಞಾನವನ್ನು ಅನಾವರಣ ಮಾಡುತ್ತದೆ. ಭಾರತವು ಯೋಗ ಮತ್ತು ಗೀತೆಯ ಜನ್ಮಭೂಮಿಯಾಗಿರುವುದರಿಂದ, ಶ್ರೀಕೃಷ್ಣರು ಗೀತೆಯಲ್ಲಿ ಬೋಧಿಸಿದ ಯೋಗದ ರಹಸ್ಯಗಳನ್ನು ಸಂಶೋಧಿಸುವ ಸಮಯವು ಬಂದಿದೆ. ಗೀತೆಯಲ್ಲಿರುವ ಜ್ಞಾನ ಮತ್ತು ಬುದ್ಧಿಯನ್ನು ಪಡೆಯಲು ಅನುಸರಿಸಬೇಕಾದ ಕ್ರಮಬದ್ಧ ವಿಧಾನವನ್ನು ತಿಳಿಸಲಾಗಿದೆ. ಈ ಮೂಲಕ ಮನಸ್ಸು ಮತ್ತು ದೇಹದ ಸಮತೋಲನವನ್ನು ಸಾಧಿಸಬಹುದು.
ಇತಿಹಾಸದಲ್ಲಿ, ವೇದ ಗ್ರಂಥಗಳು, ಪುರಾಣಗಳು, ಶಾಸ್ತ್ರಗಳು, ಮಹಾಕಾವ್ಯಗಳು ಮತ್ತು ಸಾಂಸ್ಕೃತಿಕ ಗ್ರಂಥ ಮುಂತಾದವುಗಳು—ಅನೇಕ ಆಕ್ರಮಣಕಾರರು, ಆಡಳಿತಗಾರರು, ಭಾಷಾಂತರಿಗಳು ಮತ್ತು ವಿದ್ವಾಂಸರುಗಳ ದುರುದ್ದೇಶದಿಂದ ಮೂಲ ವಿಚಾರ, ಅರ್ಥಗಳನ್ನು ತಿದ್ದುಪಡಿ ಮಾಡಿ ತಿರುಚಲ್ಪಟ್ಟಿದೆ. ಭಗವದ್ಗೀತೆಯೂ ಈ ತಿದ್ದುಪಡಿಯಿಂದ ಹೊರತುಪಟ್ಟಿಲ್ಲ. ಆದ್ದರಿಂದ, ಈ ಪುಸ್ತಕವು ಮೊದಲ ಬಾರಿಗೆ ಗೀತೆಯ ಮೂಲ ವಿಚಾರ ಮತ್ತು ಸಿದ್ಧಾಂತವನ್ನು ಪುನರಾವಿಷ್ಕರಿಸಲ್ಪಟ್ಟಿದೆ, ಗೀತೆಯನ್ನು ವೇದ ಮೂಲಕ ವಿಶ್ಲೇಷಿಸಿ, ಅದರ ಹಿಂದಿನ ಋಗ್ ವೇದೀಯ ಮಂತ್ರ ರೂಪದಲ್ಲಿ ಉಳಿದಿರುವ ಅಂಶಗಳನ್ನು ಅನಾವರಣ ಮಾಡಿದೆ.
ಈ ಪುಸ್ತಕದಲ್ಲಿ ಪುರುಷೋತ್ತಮ ಯೋಗ ಅಧ್ಯಾಯದ ಸಮಗ್ರ ವಿವರಣೆ:
ಈ ಅಧ್ಯಾಯವು ಬೌದ್ಧಿಕ ಕುತೂಹಲವನ್ನು ಉತ್ತೇಜಿಸಿ, ಆಳವಾದ ಅಧ್ಯಯನವನ್ನು ಒಳಗೊಂಡಿರುತ್ತದೆ. ಇದನ್ನು ನಿರ್ದಿಷ್ಟ ಯೋಗಾಸನಗಳೊಂದಿಗೆ ಸಂಪರ್ಕಿಸುತ್ತಾ, ಅನ್ವಯಾತ್ಮಕ ಅನುಭವ ನೀಡುತ್ತದೆ. ಭಗವದ್ಗೀತೆಯ ಅನೇಕ ವ್ಯಾಖ್ಯಾನಗಳು ಲಭ್ಯವಿದ್ದರೂ, ಈ ಪುಸ್ತಕವು ಗೀತೆಯ ಶುದ್ಧ ಮತ್ತು ಪ್ರಾಯೋಗಿಕ ಸಾರವನ್ನು ತಲುಪಿಸುವ ಪ್ರಯತ್ನ ಮಾಡುತ್ತದೆ, ಇದು ಪ್ರತಿ ಜೀವಿಗೂ ಯೋಗಮಾರ್ಗದತ್ತ ಪ್ರೇರಣೆ ನೀಡಿ ನೈಜ ಯೋಗಿ ಯಾಗಲು ಸಹಕರಿಸುತ್ತದೆ.
Mani –
Must Read